ಆಯಸ್ಕಾಂತೀಯ ವ್ಯಕ್ತಿತ್ವ
 ನಾಗಪುರ ನಗರದಲ್ಲಿ ಸಂಘ ಶಾಖೆಗಳು ಹಬ್ಬತೊಡಗಿದವು. ಮೊದಲು ಇದ್ದ ಒಂದೇ ಶಾಖೆ ಕ್ರಮೇಣ ಎರಡಾಗಿ, ನಾಲ್ಕಾಗಿ, ಮುಂದೆ ಇಪ್ಪತ್ತರವರೆಗೆ ಹೆಚ್ಚಿದವು. ಡಾಕ್ಟರ್‌ಜಿ ಅವರ ಮನೆಗಂತೂ ತರುಣ ಬಾಲ ಸ್ವಯಂಸೇವಕರಿಗೆಲ್ಲ ನಿತ್ಯ ಯಾತ್ರೆ. ಹಳೆಯ ಸ್ವಯಂಸೇವಕರು ತಮ್ಮ ಜೊತೆಯಲ್ಲಿ ಹೊಸ ಹೊಸಬರನ್ನು ಕರೆತರುತ್ತಿದ್ದುದು ಸರ್ವೇ ಸಾಮಾನ್ಯ. ಬಂದಂತಹ ಪ್ರತಿಯೊಬ್ಬರನ್ನೂ ಗಮನಿಸಿ ಡಾಕ್ಟರ್‌ಜಿ ಅವರ ಪರಿಚಯ ಮಾಡಿಕೊಳ್ಳುತ್ತಿದ್ದರು. ಅವರ ನಿಷ್ಕಪಟ ಅಕ್ಕರೆಯ ಮಾತುಗಳಿಂದ ಪ್ರಭಾವಿತರಾದ ಪ್ರತಿಯೊಬ್ಬನಿಗೂ ತನ್ನ ಬಗ್ಗೆ ಡಾಕ್ಟರ್‌ಜಿಗೆ ವಿಶೇಷ ಆಸೆ ಎನಿಸುತ್ತಿತ್ತು.
ತಮ್ಮ ಆಯಸ್ಕಾಂತೀಯ ವ್ಯಕ್ತಿತ್ವದಿಂದ ನಾಗಪುರದಲ್ಲಿನ ಹೊಸ ಪೀಳಿಗೆಯ ನೂರಾರು ತರುಣರನ್ನು ಡಾಕ್ಟರ್‌ಜಿ ತಮ್ಮ ಕಡೆಗೆ ಆಕರ್ಷಿಸುತ್ತಿದ್ದರು. ದಿನದಲ್ಲೊಮ್ಮೆ ಅವರ ಮನೆಗೆ ಹೋಗಿ ಅಲ್ಲಿ ಹದಿನೈದು ಇಪ್ಪತ್ತು ನಿಮಿಷಗಳ ಕಾಲ ಇರುವುದನ್ನು ಒಂದು ನಿಯಮ ಮಾಡಿಕೊಂಡತಹರು ನೂರಾರು ಮಂದಿ. ಅದರಲ್ಲಿ ದೊರಕುತ್ತಿದ್ದಂತಹ ಸಮಾಧಾನ, ಆನಂದ ಜಗತ್ತಿನಲ್ಲಿ ಇನ್ನೇನು ಕೊಟ್ಟರೂ ಸಿಗದು ಎನ್ನುವುದು ಅವರಿಗೆಲ್ಲರಿಗೂ ಸಮಾನ ಅನುಭವ, ಪತ್ರಿಕೆಗಳಲ್ಲಿ ಅವರ ಹೆಸರಿಲ್ಲ, ಭಾವಚಿತ್ರವಿಲ್ಲ. ಆದರೂ ಡಾಕ್ಟರ್‌ಜಿ ಸಾವಿರಾರು ತರುಣರಿಗೆ ಪರಿಚಿತರು. ಆಪ್ತರು ಅಷ್ಟೇ ಅಲ್ಲ ತುಂಬ ಅಚ್ಚುಮೆಚ್ಚಿನ ನಾಯಕರು ಸಹ.
ಒಮ್ಮೆ ನಾಗಪುರದ ಓರ್ವ ಗೌರವಾನ್ವಿತ ಶ್ರೀಮಂತರ ಮನೆಯಲ್ಲೊಂದು ವಿವಾಹ ಸಮಾರಂಭ. ಡಾಕ್ಟರ್‌ಜಿ ಜತೆ ಸಹ ಅವರಿಗೆ ಗಾಢ ಸ್ನೇಹವಿತ್ತು. ವಿವಾಹದ ನಿಮಿತ್ತ ಅವರ ಮನೆಯಲ್ಲಿ ಭಾರೀ ಸೊಗಸಾದ ಚಪ್ಪರ ಹಾಕಲಾಗಿತ್ತು. ಬರುವ ಅತಿಥಿಗಳಿಗಾಗಿ ಅದರೊಳಗೆಲ್ಲ ಮೆತ್ತನೆಯ ಗಾದಿಗಳು ಹಾಸಿಗೆ, ದಿಂಬುಗಳು ಪನ್ನೀರ ಪಾತ್ರೆಗಳು, ಇನ್ನೂ ಅನೇಕ ರೀತಿಯ ಸತ್ಕಾರ ಪರಿಕರಗಳು. ಎಲ್ಲವೂ ಅಚ್ಚುಕಟ್ಟು. ಒಬ್ಬೊಬ್ಬರಾಗಿ ಬರುತ್ತಿದ್ದ ಪ್ರತಿಷ್ಠಿತ ನಾಗರಿಕರು ತಮಗೆ ಯೋಗ್ಯವೆನಿಸುವ ಸ್ಥಾನಗಳಲ್ಲಿ ಆಸೀನರಾಗಿದ್ದರು. ಯಾರೋ ಒಬ್ಬ ಶ್ರೀಮಂತ ಬಂದನೆಂದರೆ ಅವರ ಪರಿಚಿತರೆಲ್ಲ ಅಂತಹವರನ್ನು ಮುತ್ತಿ ಸುತ್ತ ಕುಳಿತುಕೊಳ್ಳುವರು. ಓರ್ವ ಲೇಖಕ ಯಾ ಕವಿ ಬಂದರೆಂದರೆ ಅವರ ಅಭಿಮಾನಿಗಳು, ರಾಜಕೀಯ ಪುಢಾರಿಗಳು, ಪತ್ರಕರ್ತರು. ಹೀಗೆ ಆ ಚಪ್ಪರದಲ್ಲಿ ಸೇರಿದ್ದವರೆಲ್ಲ ಅನೇಕ ವಿಧ ಖ್ಯಾತನಾಮರೇ. ಅಂತಹರೆಲ್ಲರ ಸುತ್ತಲೂ ಅವರ ಗೆಳೆಯರು, ಚೇಲಾಗಳು. ಮಹಾರಾಷ್ಟ್ರದ ಪದ್ಧತಿಯಂತೆ ಅಲ್ಲಲ್ಲಿ ತಟ್ಟೆಗಳಲ್ಲಿ ವೀಳ್ಯ, ಸುಣ್ಣ, ಕಾಚು, ಸುಪಾರಿ ಇತ್ಯಾದಿ. ಅತ್ತರು ಹಚ್ಚುವುದೇನು, ಪನ್ನೀರಿನ ಸೇಚನವೇನು, ಭಾರೀ ವೈಭವಪೂರ್ಣ ಸಮಾರಂಭ. ಬಂದಂತಹರೆಲ್ಲರೂ ತಾಂಬೂಲ ಹಾಕುತ್ತ ಹರಟೆಯಲ್ಲಿ ಮಗ್ನರಾಗಿದ್ದರು.
ಅಷ್ಟರಲ್ಲೆ ಅಲ್ಲಿಗೆ ಡಾಕ್ಟರ್‌ಜಿ ತಲುಪಿದರು. ತಮಗೆ ತಿಳಿದವರಿಗೆಲ್ಲ ವಂದಿಸುತ್ತ ಒಳಗೆ ಬಂದ ಡಾಕ್ಟರ್‌ಜಿ ಚಪ್ಪರದ ಮೂಲೆಯಲ್ಲೊಂದು ಕಡೆ ಕುಳಿತರು. ಅವರನ್ನು ಕಂಡುದೇ ತಡ, ಚಪ್ಪರದಲ್ಲಿನ ಹೆಚ್ಚಿನ ತರುಣರೆಲ್ಲ ಡಾಕ್ಟರ್‌ಜಿ ಸುತ್ತ ನೆರೆದರು. ಅಲ್ಲಿನವರೆಗೆ ತಮಗೆ ಬೇಕೆನಿಸಿದವರ ಬಳಿ ಸೇರಿ ಅವರೊಂದಿಗೆ ಹರಟುತ್ತಿದ್ದ ಎಲ್ಲರಿಗೂ ಡಾಕ್ಟರ್‌ಜಿ ಅವರನ್ನು ಕಂಡಾಗ ಸಹಜವಾಗಿಯೇ ಮಿಕ್ಕವರೆಲ್ಲರೂ ಮರೆತೇಹೋದರು. ಅವರೊಬ್ಬರೇ ಎಲ್ಲರಿಗೂ ಕೇಂದ್ರವಾದರು. ಸೂರ್ಯನ ಉದಯವಾದಾಗ ಅದುವರೆಗೆ ಹೊಳೆಯುತ್ತಿದ್ದ ನಕ್ಷತ್ರಗಳೆಲ್ಲ ನಿಷ್ಪ್ರಭಗೊಳ್ಳುವಂತೆ ಮೊದಲು ಬಂದ ನಾಯಕರೆಲ್ಲರದೂ ಪಾಡಾಯಿತು.

No comments:
Post a Comment