ಅವಿರತ ಪರಿಶ್ರಮ
ಸಂಘ ಕಾರ್ಯದಲ್ಲಿ ಹಲವಾರು ವರ್ಷಗಳಿಂದ ಕಠಿಣ ಪರಿಶ್ರಮ ನಿರ್ವಹಿಸುತ್ತಿದ್ದ ಡಾಕ್ಟರ್‌ಜಿಯವರಲ್ಲಿ ಕಾಲಕ್ರಮೇಣ ಅನಾರೋಗ್ಯ ಕಾಣತೊಡಗಿತು. ಚಿಕಿತ್ಸೆ ಹಾಗೂ ವಿಶ್ರಾಂತಿಗಾಗಿ ಅವರನ್ನು ನಾಸಿಕ್‍ಗೆ ಕರೆದೊಯ್ಯಲಾಯಿತು.
ಅವರು ನಾಸಿಕಕ್ಕೆ ಹೋದುದು ವಿಶ್ರಾಂತಿಗಾಗಿ. ಆದರೆ ಅಲ್ಲಿ ಅವರು ಪ್ರತ್ಯಕ್ಷ ನಡೆಸಿದುದು ಹೊಸ ಶಾಖೆ ಆರಂಭಿಸುವ ಯತ್ನವೇ. ಸ್ವಯಂಸೇವಕರು ಅವರನ್ನು ನೋಡಲು ಬರುತ್ತಿದ್ದರು. ಅವರೊಂದಿಗೆ ಗಂಟೆಗಳವರೆಗೆ ಮಾತುಕತೆ ನಡೆಯುತ್ತಿತ್ತು. ವೈದ್ಯರು ’ಅವರಿಗೆ ಕಡ್ಡಾಯವಾಗಿ ವಿಶ್ರಾಂತಿ ಬೇಕಾಗಿದೆ, ರಾತ್ರಿ ೧೦ ಗಂಟೆಗೆ ಅವರು ಮಲಗಲೇಬೇಕು’ ಎನ್ನುತ್ತಿದ್ದರು. ಆದರೆ ಡಾಕ್ಟರ್‌ಜಿಯವರ ಬೈಠಕ್ ರಾತ್ರಿ ೨-೩ ಗಂಟೆಯವರೆಗೂ ಮುಗಿಯುತ್ತಿರಲಿಲ್ಲ. ಎಲ್ಲ ಸ್ವಯಂಸೇವಕರೂ ಮಂತ್ರಮುಗ್ಧರಾಗಿ ಕೇಳುತ್ತಾ ಇರುವಷ್ಟು ಮೋಡಿ ಆ ಮಾತುಕತೆಗಳಲ್ಲಿ. ಎಲ್ಲರಿಗೂ ಈ ಪ್ರಪಂಚವೇ ಮರೆಯುತ್ತಿತ್ತು. ಅವರನ್ನು ಮಲಗಿಸುವುದು ಎಷ್ಟು ಕಷ್ಟ ಎಂದು ವೈದ್ಯರಿಗೆ ಕಾರ್ಯಕರ್ತರು ಹೇಳಿದರು. ವೈದ್ಯರು "ನಾನೇ ಸ್ವತಃ ಇದ್ದು ೯.೪೫ಕ್ಕೇ ನೆನಪಿಸುವೆ. ೧೦ ಘಂಟೆಗೆ ಸರಿಯಾಗಿ ಅವರನ್ನು ಮಲಗಿಸುವೆ" ಎಂದರು.
ರಾತ್ರಿ ೯ ಘಂಟೆಗೇ ಆ ವೈದ್ಯರು ಡಾಕ್ಟರ್‌ಜಿ ಇದ್ದಲ್ಲಿಗೆ ಬಂದರು. ಅವರಿಗೂ ಕ್ರಮೇಣ ಡಾಕ್ಟರ್‌ಜಿ ಅವರ ಮಾತಿನ ರುಚಿ ಹತ್ತತೊಡಗಿತು. ಒಂದಾದ ಮೇಲೊಂದು ವಿಷಯ ಹರಿದುಬರುತ್ತಿತ್ತು. ಡಾಕ್ಟರ್‌ಜಿ ತಮ್ಮದೇ ಆಕರ್ಷಕ ಶೈಲಿಯಲ್ಲಿ ನಾನಾ ವಿಷಯಗಳ ಮೇಲೆ ರಸವತ್ತಾಗಿ ಮಾತನಾಡುತ್ತಿದ್ದರು. ಈ ವೈದ್ಯರೂ ಮಾತುಕತೆಗಳಲ್ಲಿ ತಲ್ಲೀನರಾಗಿದ್ದರು. ಅವರಿಗೂ ತಾವೂ ಬಂದ ಉದ್ದೇಶವೇ ಮರೆತುಹೋಯಿತು. ತುಂಬ ತಡವಾಗಿ ತಮ್ಮ ಗಡಿಯಾರ ನೋಡಿದಾಗ ಅದು ಗಂಟೆ ೧.೩೦ ತೋರಿಸುತ್ತಿತ್ತು. "ಛೇ, ಛೇ ಅವರನ್ನು ಮಲಗಿಸಲು ಬಂದ ನಾನೇ ಹೀಗಾದೆನಲ್ಲಾ" ಎಂದು ಅವರೂ ತಮ್ಮ ಸೋಲು ಒಪ್ಪಿಕೊಂಡರು.
ಡಾಕ್ಟರ್‌ಜಿಯವರ ಮಾತು ಎಷ್ಟು ಆಕರ್ಷಕ; ಅದಕ್ಕೆ ಕಾರಣವೂ ಇದೆ. ಅದರಲ್ಲಿ ಕೃತ್ರಿಮತೆ ಲವಲೇಶವೂ ಇರುತ್ತಿರಲಿಲ್ಲ. ಮಾತ್ರವಲ್ಲ ಅವರ ಒಂದೊಂದು ಶಬ್ದದಲ್ಲಿಯೂ ಅವರ ತಪಶ್ಚರ್ಯೆ ಹೊಮ್ಮಿ ಹರಿಯುತ್ತಿತ್ತು.

No comments:
Post a Comment