ಹಗಲಿರುಳು ಒಂದೇ ಜಪ
ಆಗ ಸ್ವಾತಂತ್ರ್ಯ ಹೋರಾಟದ ಕಾಲ ಕಾಕೋರಿ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ ಕ್ರಾಂತಿಕಾರಿ ರೋಶನ್ ಸಿಂಹನಿಗೆ ಮರಣದಂಡನೆ ವಿಧಿಸಲಾಗಿತ್ತು. ಆತನ ಬಲಿದಾನವಾಯಿತು. ಆ ಕುಟುಂಬದ ಮೇಲೆ ಸಂಕಟಗಳ ಸರಮಾಲೆಗಳೇ ಬಂದೆರಗಿದವು.
ತುಂಬಾ ಕಷ್ಟಗಳ ಮಧ್ಯೆಯೂ ಆತನ ಮಗಳ ಮದುವೆ ನಿಶ್ಚಯವಾಯಿತು. ಆದರೆ ಅವರಿಗಾಗದ ಪೊಲೀಸ್ ಇನ್ಸ್‍ಪೆಕ್ಟರನೊಬ್ಬ ’ಕ್ರಾಂತಿಕಾರಿಗಳ ಮನೆಯ ಹುಡುಗಿಯನ್ನು ಮದುವೆ ಆಗುವುದೆಂದರೆ ಅಪರಾಧ, ರಾಜದ್ರೋಹ. ಅದಕ್ಕೆ ಶಿಕ್ಷೆಯೂ ಆಗಬಹುದು’ ಎಂದು ವರನ ಮನೆಯವರನ್ನು ಬೆದರಿಸಿದ.
ಇದನ್ನೆಲ್ಲ ಲೆಕ್ಕಿಸದ ವರನ ಮನೆಯವರು ’ಭಾರತಮಾತೆಯ ಬಿಡುಗಡೆಗಾಗಿ ಬಲಿದನಗೈದವರ ಮನೆಯ ಮಗಳು ನಮ್ಮ ಮನೆಯ ಸೊಸೆಯಾಗಿ ಬರುವುದೇ ದೊಡ್ಡ ಸೌಭಾಗ್ಯ. ನಿಮ್ಮ ಬೆದರಿಕೆಗೆಲ್ಲಾ ನಾವು ಜಗ್ಗುವರಲ್ಲ’ ಎಂದರು. ಆ ಇನ್ಸ್‍ಪೆಕ್ಟರ್ ತೆಪ್ಪಗಾದ. ಆದರೂ ಆ ಮದುವೆಯನ್ನು ಮುರಿಯುವ ಹುನ್ನಾರವನ್ನೇ ಮುಂದುವರೆಸಿದ.
ಈ ಸಂಗತಿ ಪತ್ರಿಕಾ ಸಂಪಾದಕರೊಬ್ಬರಿಗೆ ತಿಳಿಯಿತು. ಅವರ ರಕ್ತ ಕುದಿಯಿತು. ತಕ್ಷಣ ಆ ಇನ್ಸ್‍ಪೆಕ್ಟರನನ್ನು ಕಂಡರು. ’ಏಯ್! ಎಂಥಾ ಮನುಷ್ಯನಯ್ಯ ನೀನು! ಸ್ವಲ್ಪವಾದರೂ ಮಾನವೀಯತೆ ಬೇಡವೇನು? ಕೆಟ್ಟದ್ದನ್ನೇ ಮಾಡುವುದರಲ್ಲಿ ಧನ್ಯತೆ ಕಾಣುವ ನೀಚತನ ನಿನ್ನದಾಯಿತಲ್ಲ? ವಿಷಬೀಜ ಬಿತ್ತಿದರೆ ಅದನ್ನೇ ಉಣ್ಣಬೇಕಾಗುತ್ತದೆ. ನಿನ್ನ ಭವಿಷ್ಯದ ಮೇಲೆ ನೀನೇ ಕಲ್ಲು ಹಾಕಿಕೊಂಡಂತಾಗುತ್ತದೆ’ ಎಂದು ಕಟುವಾಗಿ ನುಡಿದರು.
ಸಂಪಾದಕರ ಈ ಮಾತು ಕೇಳಿ ಇನ್ಸ್‍ಪೆಕ್ಟರನ ಕಣ್ಣು ತೆರೆಯಿತು. ತನ್ನ ತಪ್ಪಿನ ಅರಿವಾಗಿ ರೋಶನ್ ಸಿಂಹರ ಹೆಂಡತಿಯ ಕ್ಷಮೆ ಕೇಳಿದ. ಮಾತ್ರವಲ್ಲ, ಮದುವೆಯ ಖರ್ಚೆಲ್ಲವನ್ನು ತಾನೇ ಕೊಡುವನೆಂದ.
Labels: Boudhik Story, Independence Movement, Roshan Singh, ಬೌದ್ಧಿಕ ಕಥೆಗಳು, ಮಗಳ ಮದುವೆ, ರೋಶನ್‌ಸಿಂಹ

No comments:
Post a Comment