ಅವರ ವಿನಮ್ರತೆ
ಸಂಘದ ಕಾರ್ಯದ ಮುಂದೆ ಡಾಕ್ಟರ್‌ಜಿಗೆ ತನ್ನ ಮಾನ ಅಪಮಾನಗಳು ದೊಡ್ಡದೆನಿಸುತ್ತಿರಲಿಲ್ಲ. ಅವರು ದೇಶದಾದ್ಯಂತ ಪ್ರವಾಸ ಮಾಡುತ್ತಿದ್ದರು. ಊರೂರುಗಳಲ್ಲಿ ಕಾರ್ಯಕರ್ತರನ್ನು ಭೇಟಿಯಾಗುತ್ತಿದ್ದರು. ಸಂಘದ ಕಲ್ಪನೆಯನ್ನು ಪ್ರತಿಯೊಬ್ಬರಿಗೂ ಅರ್ಥವಾಗುವ ರೀತಿಯಲ್ಲಿ ವಿವರಿಸುತ್ತಿದ್ದರು. ಆ ದಿನಗಳಲ್ಲಂತೂ ಯಾವನೋ ಸಣ್ಣ ಮುಖಂಡನು ಸಹ ತನ್ನನ್ನು ದೊಡ್ಡವನೆಂದೇ ತಿಳಿಯುತ್ತಿದ್ದ. ತನ್ನ ವಿಚಾರವನ್ನೇ ಆಗ್ರಹಪೂರ್ವಕವಾಗಿ ಪ್ರತಿಪಾದನೆ ಮಾಡುತ್ತಿದ್ದ. ಸ್ವತಃ ತುಂಬಾ ಸ್ವಾರ್ಥಿ, ಕರ್ತೃತ್ವಶೂನ್ಯರಾಗಿದ್ದವರು ಸಹ ಡಾಕ್ಟರ್‌ಜಿಯವರಿಗೆ ಏನೇನೋ ಪ್ರಶ್ನೆ ಕೇಳುತ್ತಿದ್ದರು. ಉಪದೇಶ ನೀಡುತ್ತಿದ್ದರು.
"ಹಿಂದುಸ್ಥಾನ ಹಿಂದುಗಳದೇ ಹೇಗೆ ಸಾಧ್ಯ?" "ಹಿಂದು ಶಬ್ದ ವೇದ, ಪುರಾಣಗಳಲ್ಲಿ ಇಲ್ಲ. ಆದ್ದರಿಂದ ಆ ಶಬ್ದದ ಕುರಿತೇಕೆ ಆಗ್ರಹ?" "ಹಿಂದು ಸಂಘಟನೆಯೇ, ಅದು ಅಸಂಭವ. ಮೊಲಕ್ಕೆ ಕೋಡು ಮೂಡಬಹುದು. ನಾಯಿಯ ಬಾಲ ನೆಟ್ಟಗಾಗಬಹುದು. ಆದರೆ ಹಿಂದುಗಳು ಮಾತ್ರ ಸಂಘಟಿತರಾಗಲಾರರು. ಈ ಕಾರ್ಯದಲ್ಲಿ ನಿಮ್ಮ ಶಕ್ತಿ ಹಾಕುವುದು ವ್ಯರ್ಥವೇ ಸರಿ" ಇತ್ಯಾದಿ ಇತ್ಯಾದಿ.
ಅಷ್ಟೇ ಅಲ್ಲ - "ನೀವೇಕೆ ವಾರ್ಷಿಕೋತ್ಸವ ಮಾಡುವುದಿಲ್ಲ?" "ನೀವೇಕೆ ಚಂದಾ ಎತ್ತುವುದಿಲ್ಲ?" "ನಿಮ್ಮ ಸಿದ್ಧಾಂತವೇನೋ ಸರಿ. ಆದರೆ ನಿತ್ಯ ಬರಬೇಕೆನ್ನುವುದು ಕಠಿಣ". "ನಿಮ್ಮ ಲಾಠಿ, ಖಡ್ಗ ಇತ್ಯಾದಿ ಸರಿಯಲ್ಲ" ಹೀಗೆ ಉಪದೇಶಿಸುವವರಿಗೂ ಕೊರತೆಯೇ ಇರಲಿಲ್ಲ. ಯಾರೋ ಒಬ್ಬನಿಗೆ ಸಮತಾ ಒಳ್ಳೆಯದೆನಿಸಿದರೆ ಮತ್ತೊಬ್ಬನಿಗೆ ಅದು ಬಹಳ ಹಾನಿಕಾರಕ ಎನಿಸುತ್ತಿತ್ತು. "ನೀವು ಹಿಂಸಾಚಾರಕ್ಕೆ ಪ್ರೋತ್ಸಾಹ ನೀಡುತ್ತಿರುವಿರಿ" ಎನ್ನುವುದು ಇನ್ನೂ ಕೆಲವರ ಆರೋಪ. "ಏನೂ ಕೆಲಸ ಮಾಡದ ಅಹಿಂಸಕರು ನೀವು" ಎನ್ನುತ್ತಿದ್ದರು ಮತ್ತೂ ಕೆಲವರು. ಕತ್ತಿ ಲಾಠಿಗಳ ಬಗ್ಗ್ಗೆ ತಿರಸ್ಕಾರವಿದ್ದವರು ಸಂಘದಲ್ಲಿ ಬಾಂಬು ಪಿಸ್ತೂಲುಗಳನ್ನು ಬಳಸುವುದಾದಲ್ಲಿ ತಾವೂ ಬರುತ್ತೇವೆ ಎನ್ನುತ್ತಿದ್ದುದೂ ಉಂಟು. ಕೆಲವರು "ಸಂಘದಲ್ಲಿ ನಿಮ್ಮ ಭಾಷಣ ನಾವು ಕೇಳಿದ್ದೇವೆ" ಎನ್ನುತ್ತಿದ್ದುದೂ ಉಂಟು. "ಆದರೆ ನೀವೆಂದೂ ಇಂಗ್ಲೀಷರಿಗಾಗಲೀ ಮುಸಲ್ಮಾನರಿಗಾಗಲಿ ಬಯ್ಯುವುದೇ ಇಲ್ಲ. ನೀವು ಬರೀ ಸಪ್ಪೆ" ಎಂದು ಅಸಮಾಧಾನ ತೋರುತ್ತಿದ್ದರು.
ಕೆಲವರಿಗೆ ಘೋಷಣೆ ಗೊಂದಲಗಳೇ ಇಷ್ಟ. ಮತ್ತೆ ಕೆಲವರಿಗೆ ಮೆರವಣಿಗೆ ಚಳುವಳಿಯಂತಹ ಸಂಗತಿಗಳೇ ಹೆಚ್ಚು ಸಮಂಜಸ. ಸ್ವಯಂಸೇವಕರು ಪೊರಕೆ ಹಿಡಿದು ಎಲ್ಲೆಡೆ ಸ್ವಚ್ಛ ಮಾಡಬೇಕೆನ್ನುವವರು ಕೆಲವರು. ಆಸ್ಪತ್ರೆ ಆರಂಭಿಸಿ, ಔಷದಿ ಹಂಚಿ, ಹೆಣ ಸುಡುವ ಕೆಲಸ ಮಾಡಿ ಇತ್ಯಾದಿ ಉಪದೇಶಿಸುತ್ತಿದವರೂ ಧಾರಾಳ. ಕೆಲವರಂತೂ ತಂತಮ್ಮ ಬುದ್ಧಿಗನುಗುಣವಾಗಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಧಾರ್ಮಿಕ ಇತ್ಯಾದಿ ಕಾರ್ಯ ಮಾಡುವಂತೆ ಸಲಹೆ ನೀಡುತ್ತಿದ್ದರು.
"ಯಾವುದೇ ಕೆಲಸಕ್ಕೆ ಬಾರದ ಸಂಘ ನಿಮ್ಮದು. ಇದು ಎಂದೂ ಬೆಳೆಯಲಾರದು" ಎಂದು ಕೆಲವರೆನ್ನುತ್ತಿದ್ದರು. ತಾವೇನೋ ದೊಡ್ಡವರು ಎಂದುಕೊಳ್ಳುವ ಕೆಲವರು "ಸಂಘದ ಕೆಲಸ ಚೆನ್ನಾಗಿ ನಡೆಯುತ್ತಿದೆ. ಇದೇ ರೀತಿ ನಡೆಯಲಿ" ಎಂದು ಹೇಳುತ್ತಾ ತಮ್ಮ ಗೆಳೆಯರ ಹತ್ತಿರ "ಈ ಸಂಘ ಮೂಲ ಕಲ್ಪನೆ ನನ್ನದೇ. ಕಾಲಕಾಲಕ್ಕೆ ನಾನೇ ಡಾಕ್ಟರ್‌ಜಿಗೆ ಸಲಹೆ ಕೊಡುತ್ತಿದ್ದೇನೆ. ನಾನು ಹೇಳಿದಂತೆಯೇ ಮಾಡುತ್ತಿದ್ದಾರೆ. ಹೀಗಾಗಿ ಯಶಸ್ಸು ಗಳಿಸುತ್ತಿದ್ದಾರೆ" ಎನ್ನುವರು.
ಡಾಕ್ಟರ್‌ಜಿ ಜನರ ಸಂಪರ್ಕಕ್ಕೆ ಹೋದಾಗಲೆಲ್ಲ ಇಂಥವೇ ಅನೇಕ ಮಾತುಗಳು ಕೇಳಿಬರುತ್ತಿದ್ದವು. ಶಾಂತವಾಗಿಯೇ ಅವರು ಕೇಳುತ್ತಿದ್ದರು. ಆದರೆ ಡಾಕ್ಟರ್‌ಜಿಯವರೊಂದಿಗೆ ಇರುತ್ತಿದ್ದ ಇತರ ಸ್ವಯಂಸೇವಕರಿಗೆ ಇಂತಹ ಮಾತುಗಳನ್ನು ಕೇಳಿದಾಗ ಸಿಟ್ಟು ಉಕ್ಕುತ್ತಿತ್ತು, "ಈ ಮೂರು ಕಾಸಿನ ಜನಗಳಿಗೆ ನಮ್ಮ ಡಾಕ್ಟರ್‌ಜಿಯವರಿಗೆ ಉಪದೇಶ ಕೊಡುವಷ್ಟು ಪೊಗರು ಬಂದಿದೆಯಲ್ಲಾ" ಎಂದು ಸಿಡಿಮಿಡಿಗೊಳ್ಳುತ್ತಿದ್ದರವರು. ಆದರೆ ಡಾಕ್ಟರ್‌ಜಿ ಶಾಂತವಾಗಿ ಎಲ್ಲರ ವಿಚಾರ ಕೇಳುತ್ತಿದ್ದರು. ನಮ್ರವಾಗಿ ಎಲ್ಲರಿಗೂ ಗೌರವ ಕೊಟ್ಟು ಉತ್ತರ ಕೊಡುತ್ತಿದ್ದರು. ಆಗಾಗ ನಗು ನಗುತ್ತಾ ಪ್ರಶ್ನೆಯನ್ನು ಹಾರಿಸುತ್ತಿದ್ದುದೂ ಉಂಟು. ಆದರೆ ಎಂದೂ ವಾದ ವಿವಾದಕ್ಕೆ ಇಳಿಯುತ್ತಿರಲಿಲ್ಲ. ನಂತರ ಸ್ವಯಂಸೇವಕರನ್ನು ಕುರಿತು "ನೋಡಿ ಸಂಘ ಕೇವಲ ನನ್ನದು ಅಥವಾ ನಿಮ್ಮದಷ್ಟೇ ಅಲ್ಲ. ಇದು ಇಡೀ ಸಮಾಜದ್ದು. ಆದ್ದರಿಂದಲೇ ಸಮಾಜದ ನಮ್ಮ ಬಂಧುಗಳಿಗೆ ತಮ್ಮ ವಿಚಾರ ಹೇಳಲು ಪೂರ್ತಿ ಅಧಿಕಾರ ಇದೆ. ನಾವದನ್ನು ಆದರಪೂರಕವಾಗಿಯೇ ಕೇಳಬೇಕು. ಇಂದು ಅವರು ತಮಗಿರುವ ಶಕ್ತಿಯಷ್ಟೇ ವಿಚಾರ ಮಾಡುವರು. ನಾಳೆ ಈ ಕೆಲಸವನ್ನೂ ಅವರು ಮಾಡತೊಡಗುವರು ಎಂಬ ನಂಬಿಕೆಯಿರಿಸಿ, ಅವರೇ ನಮ್ಮೊಂದಿಗೆ ಬರುವರು" ಎನ್ನುತ್ತಿದ್ದರು.
"ಹಾಗೆ ನೋಡುವುದೇ ಆದಲ್ಲಿ ಸಂಘದ ವಿಚಾರ ಸರಳ ಹಾಗೂ ಪ್ರಾಚೀನ. ನಾನು ಯಾವುದೇ ಹೊಸ ಸಂಗತಿ ಹೇಳುತ್ತಿಲ್ಲ. ನಮ್ಮ ಮಹಾನ್ ತತ್ವಜ್ಞಾನವನ್ನು ಪ್ರತ್ಯಕ್ಷ ವ್ಯವಹಾರದಲ್ಲಿ ತರುವ ಯತ್ನ ಮಾತ್ರ ಇದು. ಸಂಘ ಕಾರ್ಯದ ಆಧಾರ ಎನಿಸುವ ವಿಷಯಗಳಲ್ಲಿ ಯಾವುದೂ ಕಠಿಣ ಅಥವಾ ಜಟಿಲ ಅಲ್ಲಿ. ಆದರೆ ದೊಡ್ಡವರೆನಿಸಿಕೊಂಡವರಿಗೆ ಪ್ರತ್ಯಕ್ಷ ವ್ಯವಹಾರದ ಕಡೆಗೆ ಗಮನ ಕಡಿಮೆ. ಅವರದು ಕೇವಲ ಕಲ್ಪನಾ ವಿಲಾಸ ಮಾತ್ರ. ಆದ್ದರಿಂದ ಅಂತಹವರಿಗೆ ಸಂಘ ಅರ್ಥವಾಗದು. ಇನು ಕೆಲವರಿಗೆ ಬೇರೆಯವರು ಹೇಳುವುದೇ ಸರ್ವಶ್ರೇಷ್ಠ. ರಷ್ಯಾ, ಜರ್ಮನಿ, ಇಂಗ್ಲೆಂಡ್, ಅಮೆರಿಕಾ ಇತ್ಯಾದಿ ದೇಶಗಳ ಪ್ರಭಾವಕ್ಕೊಳಗಾಗಿರುವವರು ಅವರು. ನಮ್ಮ ದೇಶವೂ ಅದೇ ರೀತಿ ಆಗಬೇಕೆನ್ನುವುದು ಅವರ ಇಚ್ಛೆ. ಅವರು ನಮ್ಮದೆಲ್ಲವನೂ ನೋಡುವುದು ಅದೇ ಕನ್ನಡಕದ ಮೂಲಕ.
ನಮ್ಮ ದೇಶದ ಇತಿಹಾಸ, ಇಲ್ಲನ ಮೂಲಭೂತ ತತ್ವಜ್ಞಾನ ಹಾಗೂ ಅದರ ಇಂದಿನ ಪರಿಸ್ಥಿತಿ ಇವುಗಳ ಸರಿಯಾದ ಕಲ್ಪನೆ ಇರುವಂತಹವರಿಗೆ ಸಂಘವನ್ನು ತಿಳಿಯುವುದು ಕಠಿಣವೇನಲ್ಲ" ಎನ್ನುತ್ತಿದ್ದರು ಡಾಕ್ಟರ್‌ಜಿ.
ಅವರು ಹೋದಲ್ಲೆಲ್ಲಾ ಹಿರಿಯ ನಾಯಕರಿಂದ ಸಾಮಾನ್ಯ ಕಾರ್ಯಕರ್ತರವರೆಗೆ ಎಲ್ಲರನ್ನೂ ಆಸಕ್ತಿಯಿಂದ ನೋಡಿ ಮಾತನಾಡಿಸುತ್ತಿದ್ದರು. ಅದಕ್ಕಿಂತ ಮಿಗಿಲಾಗಿ ಯುವಕರು, ಬಾಲಕರೊಂದಿಗೆ ಮೈಮರೆತು ಒಂದಾಗುತ್ತಿದ್ದರು. ಅವರದು ಮಗುವಿನಂತಹ ಮನಸ್ಸು. ಹಾಗಾಗಿ ಬಾಲಕರಿಗೆ ಅವರ ಸಹವಾಸ ಬಹಳ ಇಷ್ಟವಾಗುತ್ತಿತ್ತು. ಕೆಲವೊಮ್ಮೆ ಡಾಕ್ಟರ್‌ಜಿ ವಿನೋದವಾಗಿ,
ಎಳೆಯರ ಸಹವಾಸ ಬಾರಿಸುವುದು ಮೃದಂಗ
ಮುದುಕರ ಸಹವಾಸ ಶಂಕೆಗಳ ಆತಂಕ
ಎಂದು ಹಾಡುತ್ತಿದ್ದರು.

No comments:
Post a Comment