ಡಾಕ್ಟರ್‌ಜಿಯವರ ಚಾರಿತ್ರ್ಯ ಶುದ್ಧತೆ
ಡಾಕ್ಟರ್‌ಜಿಯವರು ನಾಗಪುರದಲ್ಲಿ ರಾಜಕೀಯ ಕ್ಷೇತ್ರದಲ್ಲೂ ಸಕ್ರಿಯವಾಗಿದ್ದರು. ಆಗಿನ್ನೂ ಸಂಘ ಸ್ಥಾಪನೆಯಾಗಿರಲಿಲ್ಲ. ಸಂಘ ಸ್ಥಾಪನೆಯಾದ ನಂತರ ಡಾಕ್ಟರ್‌ಜಿಯವರು ರಾಜಕೀಯಕ್ಕೆ, ಚುನಾವಣೆ ಕ್ಷೇತ್ರಕ್ಕೆ ಹೋಗಲಿಲ್ಲ, ಸ್ವಾತಂತ್ರ್ಯ ಹೋರಾಟ ಬಿಟ್ಟು. ಡಾ|| ಮೂಂಜೆ ಎನ್ನುವವರು ಅವರ ಮಿತ್ರರು, ಆತ್ಮೀಯರು, ಹಿರಿಯರು. ಅವರು ಚುನಾವಣೆಗೆ ನಿಂತರು. ಡಾ|| ಮೂಂಜೆ ಅವರ ಪರವಾಗಿ ಪ್ರಚಾರ ಮಾಡಲು ಡಾಕ್ಟರ್‌ಜಿ ಹೋಗಿದ್ದರು. ಡಾ|| ಮೂಂಜೆಯವರ ವಿರುದ್ಧವಾಗಿ ಅಭ್ಯಂಕರ್ ಎನ್ನುವವರು ನಿಂತಿದ್ದರು. ಅಭ್ಯಂಕರರು ಒಬ್ಬ ವಕೀಲರು. ಅವರು ತಮ್ಮ ಭಾಷಣದಲ್ಲಿ ತಮ್ಮ ಎದುರಾಳಿಗಳ ಜನ್ಮ ಜಾಲಾಡುತ್ತಿದ್ದರು. ತಮ್ಮ ಎದುರಾಳಿಗಳ ಬಗ್ಗೆ ಹಾಗೆ, ಹೀಗೆ ಎಂದು ಹೀಗೆಳೆದು ಜನರನ್ನು ಮನರಂಜಿಸುತ್ತಾ ಭಾಷಣ ಮಾಡುವುದರಲ್ಲಿ ಅವರದು ಎತ್ತಿದ ಕೈ.
ಅಂತಹ ಅಭ್ಯಂಕರರು ಡಾ|| ಮೂಂಜೆಯವರ ಬಗ್ಗೆ ಸಾಕಷ್ಟು ಹೇಳಿದರು. ಡಾ|| ಮೂಂಜೆಯವರ ಸಮರ್ಥನೆಗಾಗಿ ನಿಂತಿದ್ದ ಡಾಕ್ಟರ್‌ಜಿಯವರ ವಿಷಯ ಬಂದಿತು. ತಮ್ಮ ಭಾಷಣದ ವಾಗ್ದಾಳಿಯಲ್ಲಿ ಅವರು ’ಡಾ|| ಹೆಡಗೆವಾರ್..’ ಎಂದರು, ಅಷ್ಟೇ. ಅವರಿಗೆ ಮುಂದೆ ಮಾತು ಹೊರಡಲಿಲ್ಲ. ’ನಾನು ಅವರ ಬಗ್ಗೆ ಹೇಳೋದು ಏನಿದೆ? ಅವರ ಬಗ್ಗೆ ನಾನೇನೂ ಹೇಳಲಾರೆ’ ಎಂದು ಹೇಳಿ ಸುಮ್ಮನಾದರು. ಅಭ್ಯಂಕರರ ಮಾತಿನಲ್ಲಿ ಡಾಕ್ಟರ್‌ಜಿಯವರ ಬಗ್ಗೆ ಒಂದೇ ಒಂದು ನಕಾರಾತ್ಮ ಮಾತೂ ಹೊರಡಲಿಲ್ಲ. ಏಕೆಂದರೆ ಡಾಕ್ಟರ್‌ಜಿಯವರ ಚಾರಿತ್ರ್ಯ, ಅವರ ಸಾರ್ವಜನಿಕ ಜೀವನದ ಶುದ್ಧತೆ, ಅವರ ವ್ಯಕ್ತಿ ಜೀವನದ ಶುದ್ಧತೆ ಇವು ಕಣ್ಣಿಗೆ ಕಟ್ಟುವ ಹಾಗಿದ್ದವು.
Labels: Abhyankar, Doctorji, Dr. Munje, Election, Sangha Story, ಅಭ್ಯಂಕರ್, ಚಾರಿತ್ರ್ಯ, ಡಾ|| ಮೂಂಜೆ, ಡಾಕ್ಟರ್‌ಜಿ, ಸಂಘದ ಕಥೆ,

No comments:
Post a Comment