ಹಗಲಿರುಳು ಒಂದೇ ಜಪ
ಡಾಕ್ಟರ್‌ಜಿಯವರಿಗೆ ದೈಹಿಕ ಕಷ್ಟ ಚೆನ್ನಾಗಿ ರೂಢಿ. ಸಂಘ ಕಾರ್ಯ ಆರಂಭವಾದ ನಂತರವಂತೂ ಅವರ ಕಷ್ಟಗಳಿಗೆ ತುದಿ ಮೊದಲೇ ಉಳಿಯಲಿಲ್ಲ. ಸದಾ ಪ್ರವಾಸ, ಸೈಕಲ್, ಬಸ್ಸು, ರೈಲು, ಯಾವುದು ಸಿಕ್ಕಿತೋ ಅದೇ. ಯಾವುದೂ ಇಲ್ಲದಿದ್ದಲ್ಲಿ ಕಾಲ್ನಡಿಗೆ. ಹಳ್ಳಿ ಹಳ್ಳಿಗಳಲ್ಲೂ ತಿರುಗಾಟ. ಊಟ, ವಿಶ್ರಾಂತಿಯನ್ನೂ ಲೆಕ್ಕಿಸಿದವರಲ್ಲ. ಚರೈವೇತಿ, ಚರೈವೇತಿ - ನಡೆಯುತ್ತಿರು, ನಡೆಯುತ್ತಿರು, ಸಂಘಕ್ಕಾಗಿ ದುಡಿಯುತ್ತಿರು ಇದೇ ಅವರ ಜೀವನಶೈಲಿಯಾಯಿತು.
ಪರಿಣಾಮವಾಗಿ ಡಾಕ್ಟರ್‌ಜಿಯವರ ಕಟ್ಟುಮಸ್ತಾದ ಶರೀರ ಸಹ ಜೀರ್ಣವಾಗತೊಡಗಿತು. ರೋಗದ ಚಿಹ್ನೆ ಕಾಣಲಾರಂಭಿಸಿದವು. ಒಂದೇ ಸಮನೆ ಬೆನ್ನು ನೋವಿನ ಪೀಡೆ ಕಾಣಿಸಿತು. ಚಳಿಗಾಳದಲ್ಲೂ ಬೆವರುವಂತಹ ವಿಚಿತ್ರ ಕಾಯಿಲೆ. ದಿನದಲ್ಲಿ ಎರಡು ಮೂರು ಬಾರಿ ಬನಿಯನ್ ಬದಲಿಸಬೇಕಾಗಿತ್ತು.
ಬಿಹಾರಿನ ರಾಜಗೀರ್‌ನಲ್ಲಿ ನೈಸರ್ಗಿಕವಾದ ಬಿಸಿನೀರಿನ ಕುಂಡ ಇದೆ. ಅಲ್ಲಿ ಕೆಲವು ದಿನ ನಿಯಮಿತವಾಗಿ ಸ್ನಾನ ಮಾಡಿದಲ್ಲಿ ಡಾಕ್ಟರ್‌ಜಿಯವರ ಬೆನ್ನು ನೋವು ಶಮನಗೊಳ್ಳಬಹುದು ಎಂಬ ಸಲಹೆ ಒಬ್ಬರಿಂದ ಬಂತು. ನಾಗಪುರದ ಪ್ರಮುಖ ಕಾರ್ಯಕರ್ತರೂ ಅದನ್ನೊಪ್ಪಿ ಆಗ್ರಹ ಮಾಡಿದರು. ಕೆಲವು ಡಾಕ್ಟರುಗಳಿಂದಲೂ ಅದಕ್ಕೆ ಅನುಮೋದನೆ ಬಂದಾಗ ಡಾಕ್ಟರ್‌ಜಿ ಸಹ ಒಪ್ಪಿದರು. ಅವರೊಂದಿಗೆ ಅಪ್ಪಾಜಿ ಜೋಷಿ ಹಾಗೂ ಬೇರೆ ಕೆಲವು ಕಾರ್ಯಕರ್ತರೂ ರಾಜಗೀರ್‌ಗೆ ಹೋದರು.
ರಾಜಗೀರ್‌ನಲ್ಲಿ ಚಿಕಿತ್ಸೆ ಏನೋ ಆರಂಭವಾಯಿತು. ಜೊತೆಯಲ್ಲಿ ಡಾಕ್ಟರ್‌ಜಿ ತಮ್ಮ ಪ್ರಿಯತಮ ಸಂಘ ಕಾರ್ಯವನ್ನೂ ಆರಂಭಿಸಿದರು. ದೂರ ದೂರದಿಂದ ಅಲ್ಲಿಗೆ ಬರುವಂತಹ ಎಲ್ಲರನ್ನೂ ಪರಿಚಯ ಮಾಡಿಕೊಳ್ಳುವರು. ಅವರೊಂದಿಗೆ ಆತ್ಮೀಯತೆ ಸಂಪಾದಿಸುವರು. ಆ ನಗರದ ಗಣ್ಯರನೇಕರ ಭೇಟಿ, ಮಾತುಕತೆ ಇತ್ಯಾದಿ ಸಹ ನಡೆಯತೊಡಗಿತು. ಅದಾಗಿ ಸ್ವಲ್ಪ ದಿನಗಳಲ್ಲೇ ಅಲ್ಲಿ ಸಂಘಶಾಖೆ ಸಹ ಆರಂಭವಾಯಿತು. ಸಮೀಪದ ಊರುಗಳಲ್ಲಿಯೂ ಶಾಖೆ ಆರಂಭಿಸುವ ಯೋಜನೆಗಳಾದವು. ಮುಂದೆ ಬಿಹಾರ ಪ್ರಾಂತದ ಮೂಲೆ ಮೂಲೆಗಳಲ್ಲಿಯೂ ಕಾರ್ಯ ವಿಸ್ತಾರ ಮಾಡುವ ಮಾಡುವ ಯೋಜನೆ ಸಿದ್ಧವಾಯಿತು. ಕಾರ್ಯಕರ್ತರ ಬೈಠಕ್‌ಗಳಂತೂ ಗಂಟಗಟ್ಟಲೆ ನಡೆಯುತ್ತಿದ್ದವು.
ಡಾಕ್ಟರ್‌ಜಿಯವರ ಆರೈಕೆಗಾಗಿ ಬಂದಂತಹ ಸ್ವಯಂಸೇವಕರಿಗೆ ತುಂಬ ಇಕ್ಕಟ್ಟು, ಏನು ಹೇಳಬೇಕೋ ತೋಚದು. ಡಾಕ್ಟರ್‌ಜಿ ಬಂದಿರುವುದು ಆರೈಕೆಗಾಗಿಯೇ ಅಥವಾ ಕಾರ್ಯ ವಿಸ್ತಾರಕ್ಕಾಗಿಯೇ ಯಾವುದೂ ತಿಳಿಯಲೊಲ್ಲದು. ಅವರಿಗಂತೂ ಸಂಘ ಕಾರ್ಯದ ವಿನಃ ಬೇರೆ ಚಿಂತೆಯೇ ಇದ್ದಂತಿರಲಿಲ್ಲ.
Labels: Deteriorating Health, Doctorji, Sangha Story, ಅನಾರೋಗ್ಯದ ನಡುವೆ, ಡಾಕ್ಟರ್‌ಜಿ, ಸಂಘದ ಕಥೆ, ಹಗಲಿರುಳು ಒಂದೇ ಜಪ

No comments:
Post a Comment