ಚುನಾವಣೆಯಲ್ಲಿ ಜನಸಂಘಕ್ಕೆ ಸೋಲು
’ಶಂಕರ್ಸ್ ವೀಕ್ಲಿ’ ಎನ್ನುವ ಒಂದು ಇಂಗ್ಲೀಷ್ ಪತ್ರಿಕೆ ದೆಹಲಿಯಿಂದ ಹಿಂದೆ ಬರುತ್ತಿತ್ತು. ಲೇಖನಕ್ಕಿಂತ ಹೆಚ್ಚಾಗಿ ಮುಖ್ಯವಾಗಿ ವ್ಯಂಗ್ಯಚಿತ್ರಗಳದ್ದೇ ಪತ್ರಿಕೆ ಅದು. ಅದನ್ನು ಶಂಕರನ್ ನಾಯರ್ ಎನ್ನುವವರು ನಡೆಸುತ್ತಿದ್ದರು. ಆ ಪತ್ರಿಕೆ ಈಗಿಲ್ಲ. ೧೯೭೨ರ ಚುನಾವಣೆಯ ಸಂದರ್ಭ. ಜನಸಂಘವೂ ಆ ಚುನವಾಣೆಯಲ್ಲಿ ಭಾಗವಿಹಿಸಿತ್ತು. ಜನಸಂಘದ ಜನ ಸಂಘದ ಸ್ವಯಂಸೇವಕರೂ ಎನ್ನುವ ನಂಬಿಕೆ ಜನರಿಗೆ. ಆ ಕಾಲದಲ್ಲಿ ಆ ರೀತಿ ಇದ್ದದ್ದೂ ಹೌದು. ಅನೇಕ ಪಕ್ಷಗಳೂ ಇದ್ದವು. ಕಾಂಗ್ರೆಸ್ ಆ ಚುನಾವಣೆಯಲ್ಲಿ ಜಯಭೇರಿ ಬಾರಿಸಿತು. ಉಳಿದ ಪಕ್ಷಗಳೆಲ್ಲಾ ತತ್ತರಿಸಿ ಹೋಗಿದ್ದವು. ಬಹುಶಃ ಮಹಾಮೈತ್ರಿಯ ೧೯೭೨ರ ಚುನಾವಣೆ ಅಂತ ಕಾಣಿಸುತ್ತೆ.
ಮರುವಾರದ ಶಂಕರ್ಸ್ ವೀಕ್ಲಿ ಪತ್ರಿಕೆಯಲ್ಲಿ ಒಂದು ವ್ಯಂಗ್ಯ ಚಿತ್ರ ಬಂದಿತು. ಅದೇನೆಂದರೆ, ಬೇರೆ ಬೇರೆ ಪಕ್ಷಗಳವರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಜನಸಂಘದವರು ಮಾತ್ರ ಗಣವೇಶ ಹಾಕಿಕೊಂಡು ಸಂಚಲನಕ್ಕೆ ಹೊರಟಿದ್ದಾರೆ. ಅವರಿಗೆ ಈಡೀ ದೇಶದಲ್ಲಿ ಎಲ್ಲ ಕಡೆಯೂ ಠೇವಣಿಯೇ ಹೋಗಿದೆ. ಆದರೂ ಅವರು ಏನೂ ತಿಳಿದುಕೊಳ್ಳಲಿಲ್ಲ. ಇದು ಆ ವ್ಯಂಗ್ಯಚಿತ್ರದಲ್ಲಿದ್ದದ್ದು. ಈ ವ್ಯಂಗ್ಯಚಿತ್ರ ಏನನ್ನು ಹೇಳುತ್ತದೆ. ಸೋಲು, ಗೆಲವುಗಳಿಂದ ಒಬ್ಬ ಸ್ವಯಂಸೇವಕ ನೆಲಕಚ್ಚೋದಿಲ್ಲ ಅಥವಾ ಮುಗಿಲಿಗೆ ಹಾರೋದಿಲ್ಲ. ಇದನ್ನು ಆ ವ್ಯಂಗ್ಯಚಿತ್ರ ಮಾರ್ಮಿಕವಾಗಿ ತೋರಿಸಿತು. ಸೋತಿರುವುದು ನಿಜ, ಆದರೆ ಸ್ವಯಂಸೇವಕರಿಗೆ ಇದರಿಂದ ಏನೂ ಅನ್ನಿಸಿಲ್ಲ. ಹೀಗೆ ಸಂಘದ ಸ್ವಯಂಸೇವಕರು ಯಶಸ್ಸು ಅಪಯಶಸ್ಸಿಗಾಗಿ ತಮ್ಮ ಮನಸ್ಸನ್ನು ಮುದುಡಿಕೊಳ್ಳುವುದಿಲ್ಲ.
Labels: Election, Jana Sangha, Sangha Story, Shankar's Weekly, ಚುನಾವಣೆ, ಜನಸಂಘ, ಶಂಕರ್ಸ್ ವೀಕ್ಲಿ, ಸಂಘದ ಕಥೆ, ಸೋಲು

No comments:
Post a Comment